| Title | ರೆಂಬೆ ಕೊಂಬೆಯ ಮೇಲೆ |
|---|---|
| Original Serial | Moodala Mane |
| Lyricist | Dr. Chandrashekara Kambara |
| Original Composer | Dr. C. Ashwath |
| Recreated By | Sanjay Kumar K H |
| Label | Shriswara Studios |
| Youtube Video | https://www.youtube.com/watch?v=-ZRZnOBss8Q |
| Spotify Link | https://open.spotify.com/album/4FtyQvy73oCJMwh7ldKQ1S |
ರೆಂಬೆ ಕೊಂಬೆಯ ಮೇಲೆ Lyrics in Kannada
ನಮ್ಮೂರ ಅಗಸ್ಯಾಗ, ಆಲದ ಮರ ಬೆಳದು,
ಹಾದಿ ಬೀದೆಲ್ಲ ತಂಪ ನೆರಳ…
ರೆಂಬಿ ಕೊಂಬಿಯ ಮ್ಯಾಲ ಗೂಡ ಕಟ್ಟಿದವ ರೆಕ್ಕಿ ಬಲಿತ ಹಕ್ಕಿ
ರೆಂಬಿ ಕೊಂಬಿಯ ಮ್ಯಾಲ ಗೂಡ ಕಟ್ಟಿದವ ರೆಕ್ಕಿ ಬಲಿತ ಹಕ್ಕಿ
ಗೂಡಿನ್ಯಾಗ ಮಲಿಗ್ಯಾವ ಮರಿ ಹಕ್ಕಿ..
ದೂರ ದೇಶದ, ಆ ದೂರ ದೇಶದ, ದೂರ ದೇಶದ,
ವಲಸಿಗ ಹಕ್ಕಿಗೂ ಐತಿ ಜಾಗ ಒಳಗ,
ಬನ್ನಿರಿ ನೀವು ನಮ್ಮ ಬಳಗ!
ಹಳೆಯ ಬಾವಿಯ ತಳದ ನೀರಿನ್ಯಾಗ ಹಸಿರ ಚಿಗುರತಾವ
ಹಳೆಯ ಬಾವಿಯ ತಳದ ನೀರಿನ್ಯಾಗ ಹಸಿರ ಚಿಗುರತಾವ
ಬೇರಿನ ಮೊಳಕಿ ಹೊಡಿಯತಾವ..
ಭೂತ ಬೇತಾಳ, ಹಂ ಭೂತ ಬೇತಾಳ, ಭೂತ ಬೇತಾಳ
ಜೋತ ಬಾವಲಿ ಮ್ಯಾಲ ತೂಗತಾವ,
ಮರದಾಗ ಕರಗ ಕುಣಿಯತಾವ!
ಮರದ ಎಲಿ ನೆರಳ ಮನಿಯ ಗ್ವಾಡಿಮ್ಯಾಲ ಆಡತಾವ ಆಟ
ಮರದ ಎಲಿ ನೆರಳ ಮನಿಯ ಗ್ವಾಡಿಮ್ಯಾಲ ಆಡತಾವ ಆಟ
ಮೂಡ್ಯಾವ ತೊಗಲ ಗೊಂಬಿ ಆಟ,
ಕರುಳ ಬಳ್ಳಿಯ, ಕರುಳ ಬಳ್ಳಿಯ,
ಕಥೆಯ ಹೇಳತಾವ ನೋಡ್ರಿ ಶಾಂತ ಚಿತ್ತ,
ನಾವು ನೀವು ಅದರ ಭಾಗ ಮಾತ್ರ!