Apsara Ali Kannada Version Lyrics | Apsare Neenu Lyrics | Kannada Song By Sanjay Kumar K H

Song Title Apsare Neenu
Singer Sanjay Kumar K H
Lyricist Sanjay Kumar K H
Album/Movie Natarang
Language Kannada

Apsare Neenu Lyrics in Kannada

ಏನಿದು ಮಾಯೆ, ಚೆಲುವಿನ ಛಾಯೆ,
ಕೋಮಲ ಕಾಂತಿಯ ಕೆನ್ನೆ!
ರೇವತಿ ರಾಗ, ರೂಪಕ ತಾಳ,
ನಿನ್ನಯ ನಡಿಗೆಯು ಹೆಣ್ಣೇ!

ಹೃದಯ ಬಡಿತ, ಆಗಿದೆ ಸ್ಥಗಿತ,
ರೇಷಿಮೆ ಕೂದಲು ಸೋಕಿ!
ಚಂದಿರ ಸಹಿತ, ದಾರಿಯ ಮರೆತ,
ನಿಂತಲ್ಲೇ ನಿಂತು ನೋಡುವಂಥ,

ಅಪ್ಸರೆ ನೀನು, ಮುದ್ದಾದ ರಾಣಿ ಜೇನು!
ಅಪ್ಸರೆ ನೀನು, ಗಾಳಕ್ಕೆ ಬೀಳದ ಮೀನು!
ಅಪ್ಸರೆ ನೀನು, ಕಣ್ಣಲ್ಲೇ ಕೊಲ್ಲುವೆಯೇನು?
ಅಪ್ಸರೆ ನೀನು, ಮುದ್ದಾದ ರಾಣಿ ಜೇನು!

Interlude

ಝಲ್ ಏನುತ್ತಿದೆ ನನ್ನೀ ಎದೆ, ಯಾಕೋ ನಿಲ್ಲದೆ,
ನೀನು ಸುಳಿದಾಗ!
ಅಹಾ ಲತೆ, ಎಂಥ ಸೌಮ್ಯತೆ,
ಸಾಲದು ಪದ, ವರ್ಣಿಸಲಿ ಹೇಗೆ?

ಈ ಬಿಸಿ ತಾಕಿಸಿ, ನಶೆ ಏರಿಸಿ,
ತುಸು ನಿಲ್ಲದೆ ಹೋದೆ…

ನೀನು ನಡೆದ ದಾರಿ ಕಡೆಗೆ,
ನನ್ನ ದೇಹವ ಸೆಳೆದೆ!
ನಿನ್ನ ನೋಡಲು ಇಂದ್ರನು ಕೊನೆಗೆ,
ಇಳಿದು ಬಂದನು ಧರೆಗೆ!

ಹೃದಯ ಬಡಿತ, ಆಗಿದೆ ಸ್ಥಗಿತ,
ರೇಷಿಮೆ ಕೂದಲು ಸೋಕಿ!
ಚಂದಿರ ಸಹಿತ, ದಾರಿಯ ಮರೆತ,
ನಿಂತಲ್ಲೇ ನಿಂತು ನೋಡುವಂಥ!

ಅಪ್ಸರೆ ನೀನು, ಮುದ್ದಾದ ರಾಣಿ ಜೇನು!
ಅಪ್ಸರೆ ನೀನು, ಗಾಳಕ್ಕೆ ಬೀಳದ ಮೀನು!
ಅಪ್ಸರೆ ನೀನು, ಕಣ್ಣಲ್ಲೇ ಕೊಲ್ಲುವೆಯೇನು?

Leave a Comment